Friday, 7 December 2018

ದೇವೀಸ್ತುತಿ


| ದೇವೀಸ್ತುತಿ |

ಜಯ ಜಯ ಶಂಕರಿ ಜಗದಂಬಾ | ಜಯಪರಮೇಶ್ವರಿ ಜಗದಂಬಾ |
ಓಂಕಾರೇಶ್ವರಿ ಜಗದಂಬಾ | ಶ್ರೀ ಚಕ್ರೇಶ್ವರಿ ಜಗದಂಬಾ ||ಪ||

ಕಾಮಿತದಾಯಕಿ ಜಗದಂಬಾ ನಾರದಾದಿನುತೆ ಜಗದಂಬಾ |
ಯದುವರ ಸೋದರಿ ಜಗದಂಬಾ | ಮಯೂರವಾಹಿನಿ ಜಗದಂಬಾ ||೧||

ಯಜ್ಞಾರಾಧಿತೆ ಜಗದಂಬಾ | ವಿದ್ಯಾದಾಯಕಿ ಜಗದಂಬಾ |
ಮಹಿಷ ಮರ್ದಿನಿ ಜಗದಂಬಾ | ಹೇಮಕಳಾನಿಧಿ ಜಗದಂಬಾ ||೨||

ಕನ್ಯಕಾಂಬಿಕೆ ಜಗದಂಬಾ | ಯಶಪ್ರದಾಯಕಿ ಜಗದಂಬಾ |
ಕುಂಕುಮ ಶೋಭಿತೆ ಜಗದಂಬಾ | ಮಾಯಾಮೋಹಿನಿ ಜಗದಂಬಾ ||೩||

ರಿಪುಕುಲಮರ್ದಿನಿ ಜಗದಂಬಾ | ಧೀರಪ್ರಭಾಮಯಿ ಜಗದಂಬಾ |
ಹಿಮಗಿರಿ ತನಯೆ ಜಗದಂಬಾ | ತಮಪರಿಹಾರಿಕೆ ಜಗದಂಬಾ ||೪||

ನೊಲವಿನ ಗುಣಮಣಿ ಜಗದಂಬಾ | ನಾಟ್ಯಕಲಾಮಯಿ ಜಗದಂಬಾ |
ಗೀತಾರೂಪಿಣಿ ಜಗದಂಬಾ | ಪ್ರಣವ ಸ್ವರೂಪಿಣಿ ಜಗದಂಬಾ ||೫||

ದನುಜ ಭಂಜಿನಿ ಜಗದಂಬಾ | ಚೋದ್ಯಶಿಖಾಮಣಿ ಜಗದಂಬಾ |
ಯತಿ ಜನ ರಕ್ಷಕಿ ಜಗದಂಬಾ | ಮುನಿಜನ ವಂದಿತೆ ಜಗದಂಬಾ ||೬||

ಸತ್ಯಸ್ವರೂಪಳೆ ಜಗದಂಬಾ | ನಿತ್ಯಾನಂದಳೆ ಜಗದಂಬಾ |
ಸತ್ ಚಿತ್ ಸುಖರೂಪೆ ಜಗದಂಬಾ | ಸರ್ವ ಸೌಖ್ಯದಾತೆ ಜಗದಂಬಾ ||೭||

ಕಮಲಚೋದ್ಭವೇ ಜಗದಂಬಾ | ಕಾಮಹರನ ಸತಿ ಜಗದಂಬಾ |
ಕರುಣಾಸಾಗರಿ ಜಗದಂಬಾ | ಕಾತ್ಯಾಯಿನಿ ಜಗದಂಬಾ ||೮||

ಕಾಳಿ ಮಹಾಕಾಳಿ ಜಗದಂಬಾ | ಖಡ್ಗಧಾರಿಣಿ ಜಗದಂಬಾ |
ಅಸುರ ಸಂಹಾರಿಣಿ ಜಗದಂಬಾ | ಅಭಯಪ್ರದಾಯಿನಿ ಜಗದಂಬಾ ||೯||

ತ್ರಿಗುಣಾತೀತಳೆ ಜಗದಂಬಾ | ತ್ರಿಭುವನ ಪಾಲಕಿ ಜಗದಂಬಾ |
ತ್ರಿಪುರಸುಂದರಿ ಜಗದಂಬಾ | ತ್ರಿಶೂಲಧಾರಿಣಿ ಜಗದಂಬಾ ||೧೦||

ದುರ್ಗಾದೇವಿಯೆ ಜಗದಂಬಾ | ದುರಿತ ನಿವಾರಿಣಿ ಜಗದಂಬಾ |
ಸುರಮುನಿ ವಂದಿತೆ ಜಗದಂಬಾ | ಸರ್ವಾಧಾರಳೆ ಜಗದಂಬಾ ||೧೧||

ನಾದಸ್ವರೂಪಳೆ ಜಗದಂಬಾ | ವೇದೋದ್ಧಾರಕಿ ಜಗದಂಬಾ |
ಭವಭಯ ಹಾರಿಣಿ ಜಗದಂಬಾ | ರಾಜ ರಾಜೇಶ್ವರಿ ಜಗದಂಬಾ ||೧೨||

ಶಕ್ತಿಸ್ವರೂಪಳೆ ಜಗದಂಬಾ | ಮುಕ್ತಿಪ್ರದಾಯಕಿ ಜಗದಂಬಾ |
ಭಕ್ತಿಪ್ರಿಯಳೆ ಜಗದಂಬಾ | ಬಂಧವಿಮೋಚಕಿ ಜಗದಂಬಾ ||೧೩||

ವಿಶ್ವಸ್ವರೂಪಳೆ ಜಗದಂಬಾ | ವಿಶ್ವಾಧಾರಳೆ ಜಗದಂಬಾ |
ವಿಶ್ವವಿಖ್ಯಾತಳೆ ಜಗದಂಬಾ | ವಿಶ್ವೇಶ್ವರಿಯೆ ಜಗದಂಬಾ ||೧೪||

ಅಜ್ಞಾನಿ ನಾನು ಜಗದಂಬಾ | ಸುಜ್ಞಾನ ನೀಡೌ ಜಗದಂಬಾ |
ಶ್ರೀ ಶುಭ ಮಂಗಳೆ ಜಗದಂಬಾ | ಜಯಶುಭ ಮಂಗಳೆ ಜಗದಂಬಾ ||೧೫||

ಜಗದಂಬಾ ತಾಯೆ ಜಗದಂಬಾ | ಜಗದಂಬಾ ತಾಯೆ ಜಗದಂಬಾ |
ಜಗದಂಬಾ ತಾಯೆ ಜಗದಂಬಾ | ಜಗದಂಬಾ ತಾಯೆ ಜಗದಂಬಾ |

No comments:

Post a Comment

Sri Srinivasa Mangalam - Sanskrit

। श्री श्रीनिवास मंगळं । सर्वमंगलसंभूतिस्थानवॆंकटभूधरॆ । नित्य क्लृप्त निवासाय श्रीनिवासाय मं...